ಪತ್ರಕರ್ತರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಗೆ ಲಿಂಗಸೂಗೂರು ತಂಡದ ಜರ್ಸಿ ಬಿಡುಗಡೆ

Veer Rc
By Veer Rc

ಲಿಂಗಸೂಗೂರು, ಜೂನ್ 22: ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ನಾಳೆ ರಾಯಚೂರು ಜಿಲ್ಲಾಮಟ್ಟದಲ್ಲಿ ನಡೆಯಲಿರುವ ಕ್ರಿಕೆಟ್ ಟೂರ್ನಮೆಂಟ್‌ಗೆ ಭಾಗವಹಿಸಲಿರುವ ಲಿಂಗಸೂಗೂರು ತಾಲೂಕು ಕ್ರಿಕೆಟ್ ತಂಡದ ಜರ್ಸಿಯನ್ನು ಇಂದು ಲಿಂಗಸೂಗೂರು ಪಟ್ಟಣದ ಪತ್ರಿಕಾ ಭವನದ ಮುಂಭಾಗದಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಶಿವುರಾಜ ಕೆಂಬಾವಿ, ಘನಮಠದಯ್ಯಾ, ಗಂಗಾಧರ್ ನಾಯಕ, ಲಕ್ಷಣ ಬಾರೀಕರ್, ಚಂದ್ರಶೇಖರ ನಾಯಕ, ಗೌತಮ್ ಕುಮಾರ, ರಾಘವೇಂದ್ರ ಭಜಂತ್ರಿ, ಪಂಪಾಪತಿ ಭಜಂತ್ರಿ, ಅರುಣ್ ಕುಮಾರ, ಶ್ರೀಕಾಂತ್, ಚಂದ್ರು ಹಾಗೂ ಕಿಶೋರ್ ಉಪಸ್ಥಿತರಿದ್ದು ತಂಡಕ್ಕೆ ಶುಭ ಹಾರೈಸಿದರು.
ಪತ್ರಕರ್ತರ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಈ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಲಿಂಗಸೂಗೂರು ತಾಲೂಕಿನ ತಂಡ ಉತ್ತಮ ಪ್ರದರ್ಶನ ನೀಡಿ ತಾಲೂಕಿನ ಹೆಸರನ್ನು ಜಿಲ್ಲಾಮಟ್ಟದಲ್ಲಿ ಎತ್ತಿಹಿಡಿಯಲಿ ಎಂದು ಉಪಸ್ಥಿತರು ಆಶಯ ವ್ಯಕ್ತಪಡಿಸಿದರು.

Share This Article