ಲಿಂಗಸೂಗೂರು. ಜೂ 21 ಇತಿಹಾಸ ಪುಟಗಳಲ್ಲಿ ಮಹಾರಾಣ ಪ್ರತಾಪ ಅವರಂತಹ ರಜಪೂತ ಅರಸರು ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಗೌರವದ ಪ್ರತೀಕವಾಗಿ ನೆನಪಾಗುತ್ತಾರೆ. ಅವರ ಜೀವನವು ಧೈರ್ಯ, ಶಿಸ್ತು ಮತ್ತು ದೇಶಭಕ್ತಿಯ ಉತ್ತಮ ಉದಾಹರಣೆಯಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ರಜಪೂತ ಸಮಾಜದ ಸಾಂಸ್ಕೃತಿಕ ಭವನದ ಆವರಣದಲ್ಲಿ ಜರುಗಿದ ಶ್ರೀ ಮಹಾರಾಣಾ ಪ್ರತಾಪ ಸಿಂಹ ಜೀ ಅವರ 486ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾರಾಣಾ ಪ್ರತಾಪಸಿಂಹರ ಜೀವನವು ಯುವಜನರಿಗೆ ಪ್ರೇರಣೆಯಾಗಿದ್ದು, ಸ್ವಾಭಿಮಾನ, ಶೌರ್ಯ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ರಜಪೂತ ಮಹಾಸಭಾದ ರಾಜ್ಯ ಸಂಚಾಲಕಿ ಶ್ರೀಮತಿ ಅನ್ನಪೂರ್ಣಸಿಂಗ್, ರಜಪೂತ ಯುವ ಶಕ್ತಿ ಸಂಘಟನೆಯ ರಾಜ್ಯ ಸಂಚಾಲಕ ಮಹಾದೇವ ಪ್ರಸಾದ್ ತಿವಾರಿ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ, ಗಿರಿಮಲ್ಲನಗೌಡ ಕರಡಕಲ್, ವೆಂಕನಗೌಡ ಐದನಾಳ, ರಜಪೂತ ಸಮಾಜದ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ ಶ್ರೀವಾಸ್ತವ್ ಉಪಾಧ್ಯಕ್ಷ ಸುಭಾಷಸಿಂಗ್ ಬ್ಯಾಳಿ, ಕಾರ್ಯದರ್ಶಿ ದುರ್ಗಾ ಸಿಂಗ್ ಖಜಾಂಚಿ ರಾಜೇಂದ್ರ ಸಿಂಗ್ ಹಜೇರಿ ಮಾಜಿ ಅಧ್ಯಕ್ಷ ದಶರಥ ಸಿಂಗ್, ಮಂಜುನಾಥ ಸಿಂಗ್, ಶಿವರಾಜ ಸಿಂಗ್, ಸುಧೀರ ಸಿಂಗ್, ವಿಕ್ರಮ್ ಸಿಂಗ್, ತುಳಜಾರಾಮಸಿಂಗ್, ರಾಜು ಸಿಂಗ್ ಮೆಕಾನಿಕ್ ಸೇರಿದಂತೆ ಕಂಪ್ಲಿ, ಮುದ್ದೇಬಿಹಾಳ, ಕವಿತಾಳ ರಜಪೂತ ಸಮಾಜದ ಅಧ್ಯಕ್ಷರುಗಳು ಭಾಗವಹಿಸಿದ್ದರು.
ಮಹಾರಾಣಾ ಪ್ರತಾಪ ಸಿಂಹ ಗೌರವ ಮತ್ತು ಸ್ವಾಭಿಮಾನದ ಸಂಕೇತ ರಾಯಲವಾಣಿ