ತಾಯಿ ಜೊತೆ ಅಕ್ರಮ ಸಂಬಂಧ.. ದೃಶ್ಯಂ ಚಿತ್ರದ ಮಾದರಿಯಲ್ಲಿ ಕೊಲೆ :: ಬ್ರೆನ್ ಮ್ಯಾಪಿಂಗ್, ಪಾಲಿಗ್ರಾಪಿ ಪರೀಕ್ಷೆಯಲ್ಲಿ ಮಗ-ಅಪ್ಪ ರಹಸ್ಯ ಬಯಲು.!

 

ವಿಜಯಪುರದಲ್ಲೊಂದು ದೃಶ್ಯಂ ಚಿತ್ರದ ಮಾದರಿಯಲ್ಲಿ ಕೊಲೆ ಪ್ರಕರಣ ನಡೆದಿದೆ. ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. 2025ರ ಮೇ 31ರಂದು
ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ ಎ ಗ್ರಾಮದಲ್ಲಿ ಮಹಾದೇವಪ್ಪ ಎಂಬಾತನ ಕೊಲೆ ಆಗಿತ್ತು. ಜಮೀನು ಮಾಲೀಕನ ಪತ್ನಿ ಮಲ್ಲಮ್ಮ ಜೊತೆ ಮಹಾದೇವಪ್ಪ ಅಕ್ರಮ ಸಂಬಂಧ ಹೊಂದಿದ್ದ. ಈ ವಿಷಯ ಮಲ್ಲಮ್ಮನ ಮಗ ಅಪ್ಪುಗೌಡ, ಗಂಡ ಸಿದ್ದನಗೌಡಗೆ ಗೊತ್ತಾಗಿತ್ತು. ಮಹಾದೇವನನ್ನ ಕೊಲೆ ಮಾಡಿ, ಹೂತು ಹಾಕಿದ್ರು. ಮೊಬೈಲ್ ಬಳಸದೇ ಯಾರಿಗೂ ಅನುಮಾನ ಬಾರದಂತೆಉರಿನಲ್ಲೇ ಉಳಿದುಕೊಂಡಿದ್ರು. ಕೊನೆಗೆ ಬ್ರೆನ್ ಮ್ಯಾಪಿಂಗ್, ಪಾಲಿಗ್ರಾಪಿ ಪರೀಕ್ಷೆಯಲ್ಲಿ 6 ತಿಂಗಳ ಬಳಿಕ ಅಪ್ಪ-ಮಗನ ಕೊಲೆ ಕೃತ್ಯ ಬಯಲಾಗಿದೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ