ಬಂಧಿಯಾದ ಮಹಿಳೆಯ ಬಳಿ ಮಗಳನ್ನು ಲೈಂಗಿಕ ಸುಖಕ್ಕೆ ಕೇಳಿದ ಎಎಸ್‌ಐ ಅಮಾನತು.!

ಅಕೋಲಾ: ‘ರಕ್ಷಕನೇ ಭಕ್ಷಕ’ ಎಂಬ ಮಾತಿಗೆ ಅನ್ವರ್ಥವೆಂಬಂತೆ, ಮಹಾರಾಷ್ಟ್ರದ ಅಕೋಲಾದಲ್ಲಿ ವಿಚಾರಣೆಗೆ ಬಂದಿದ್ದ ಮಹಿಳೆಯ ಬಳಿ ಆಕೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ತನ್ನ ಮನೆಗೆ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದ ಸಹಾಯಕ ಪೊಲೀಸ್ ಉಪನಿರೀಕ್ಷಕ (ASI) ರಾಜೇಶ್ ಜಾಧವ್‌ನನ್ನು ಅಮಾನತುಗೊಳಿಸಲಾಗಿದೆ.

ವಂಚನೆ ಪ್ರಕರಣವೊಂದರಲ್ಲಿ ವಶದಲ್ಲಿದ್ದ ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ ಜಾಧವ್, “ನೀನು ಸುಂದರವಾಗಿದ್ದೀಯಾ, ನಿನ್ನ ಮಗಳೂ ಸುಂದರವಾಗಿರಬೇಕು. ಆಕೆಯನ್ನು ನನ್ನ ಮನೆಗೆ ಕಳುಹಿಸಿಕೊಡು, ಬದಲಿಗೆ 10,000 ರೂ. ನೀಡುತ್ತೇನೆ” ಎಂದು ಆಮಿಷವೊಡ್ಡಿದ್ದ ಎನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದ ಮಹಿಳೆ ತಕ್ಷಣವೇ ಮಹಿಳಾ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಎಸ್‌ಪಿ ಅರ್ಚಿತ್ ಚಂದಕ್ ಅವರು ಆರೋಪಿಯನ್ನು ಅಮಾನತುಗೊಳಿಸಿದ್ದಾರೆ. ಸದ್ಯ ರಾಜೇಶ್ ಜಾಧವ್ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ಅಧಿಕಾರಿಯ ಮೇಲೆ ಈ ಹಿಂದೆಯೂ ಇಂತಹ ಹಲವು ದೂರುಗಳಿದ್ದವು ಎಂದು ತಿಳಿದುಬಂದಿದೆ. ಪೊಲೀಸ್ ಇಲಾಖೆಗೆ ಮುಜುಗರ ತಂದಿರುವ ಈ ಕೃತ್ಯದ ಬಗ್ಗೆ ತೀವ್ರ ತನಿಖೆ ಮುಂದುವರಿದಿದೆ.
#MaharastraNews #akolanews #Asipolice

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ