ದೇವರ ಹಿಪ್ಪರಗಿ: ಪಟ್ಟಣದ ಐತಿಹಾಸಿಕ ಶ್ರೀ ಜಡಿ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಜಡಿಸಿದ್ಧೇಶ್ವರ ಮಹಾಸ್ವಾಮಿಗಳ ಜನ್ಮದಿನದ ಅಂಗವಾಗಿ, ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಬಸನಗೌಡ ಎಸ್. ಪಾಟೀಲ (ಯಡಿಯಾಪುರ) ಅವರು ಶ್ರೀಗಳನ್ನು ಭೇಟಿ ಮಾಡಿ ಸನ್ಮಾನಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಪಾಟೀಲರು, “ಜನ್ಮದಿನವೆಂದರೆ ಕೇವಲ ಸಂಭ್ರಮವಲ್ಲ, ಅದು ಗುರುವಿನ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪದ ದಿನವಾಗಿದೆ. ‘ಕಾಯಕವೇ ಕೈಲಾಸ’ ಎಂಬ ತತ್ವದಡಿ ಬದುಕುತ್ತಿರುವ ಪೂಜ್ಯ ಶ್ರೀಗಳ ಸರಳ ಜೀವನ ಮತ್ತು ಸಮಾಜಮುಖಿ ಚಿಂತನೆಗಳು ನಮಗೆಲ್ಲರಿಗೂ ಆದರ್ಶಪ್ರಾಯವಾಗಿವೆ,” ಎಂದು ತಿಳಿಸಿದರು.

ಶ್ರೀ ಮಠದ ಈ ಪರಂಪರೆಯು ಇನ್ನು ಎತ್ತರಕ್ಕೆ ಬೆಳೆಯಲಿ. ಭಗವಂತನು ಪೂಜ್ಯ ಶ್ರೀಗಳಿಗೆ ಸುದೀರ್ಘ ಆಯಸ್ಸು, ಆರೋಗ್ಯ ಮತ್ತು ಸಮಾಜ ಸೇವೆ ಮಾಡಲು ಹೆಚ್ಚಿನ ಶಕ್ತಿಯನ್ನು ನೀಡಲಿ. ಅವರ ಆಶೀರ್ವಾದದ ಹಸ್ತ ಸದಾ ಸಮಾಜದ ಮೇಲಿರಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.
ಅವರೊಂದಿಗೆ ಮಠದ ಭಕ್ತಾದಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.