ವಿಜಯಪುರ: ಗೋವಾದಲ್ಲಿ ಮೇ ತಿಂಗಳಿನಲ್ಲಿ ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಲ್ಲೆಯ ಹಾಗೂ ರಾಜ್ಯದ ಪ್ರತಿಭಾವಂತ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಿನಾಂಕ 5 ರಿಂದ 7 ರವರೆಗೆ ಆಯೋಜನೆ:
ಬರುವ ಮೇ 5 ರಿಂದ 7, 2026 ರವರೆಗೆ ಗೋವಾದಲ್ಲಿ ‘9ನೇ ಅಖಿಲ ಭಾರತೀಯ T-10 ಓವರ್ ಆರ್ಮ್ ಕ್ರಿಕೆಟ್ ಕ್ರೀಡಾಕೂಟ’ ಹಾಗೂ ‘ಫೆಡರೇಶನ್ ಕಪ್ ರಾಷ್ಟ್ರೀಯ T-10 ಓವರ್ ಆರ್ಮ್ ಕ್ರಿಕೆಟ್’ ಪಂದ್ಯಾವಳಿಗಳು ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ.

ಯಾರಿಗೆ ಅವಕಾಶ?:
ಈ ಕ್ರೀಡಾಕೂಟದಲ್ಲಿ ಪ್ರಮುಖವಾಗಿ 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಕ್ಕೆ ಅವಕಾಶವಿದ್ದು, ಇದರೊಂದಿಗೆ ಫೆಡರೇಶನ್ ಕಪ್ ಪಂದ್ಯಾವಳಿಗಳೂ ಸಹ ನಡೆಯಲಿವೆ. ಓವರ್ ಆರ್ಮ್ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿರುವ ಕ್ರೀಡಾಪಟುಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ಹೆಸರು ನೋಂದಣಿಗೆ ಸೂಚನೆ:
ಈ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಇಚ್ಛಿಸುವ ಕ್ರೀಡಾಪಟುಗಳು ಮತ್ತು ತರಬೇತುದಾರರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಬಸವರಾಜ ಎಂ. ಬಾಗೇವಾಡಿ (ಸಾ|| ಉತ್ನಾಳ) ಇವರ ಮೊಬೈಲ್ ಸಂಖ್ಯೆ: 9901944390 ಗೆ ಸಂಪರ್ಕಿಸಲು ಕೋರಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ