ಗಂಗಾಧರ ನಾಯಕ ಪತ್ರಿಕಾ ಸೇವೆ ಆಗಾದ ನೇರ, ದಿಟ್ಟ, ಸತ್ಯ ವರದಿಯ ಸರದಾರ ಪತ್ರಿಕೋದ್ಯಮಕ್ಕೆ ಹೊಸ ಅಧ್ಯಾಯ ಬರೆದ ಯುವ ಪತ್ರಕರ್ತರ

Veer Rc
By Veer Rc

ಲಿಂಗಸುಗೂರ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಲಿಂಗಸುಗೂರ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಗಂಗಾಧರ ನಾಯಕ ಗುಂತಗೋಳ ಅವರಿಗೆ ಮಾದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಲಾನಿಕೇತನ ಟ್ರಸ್ಟ್ ಸಗರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವತಿಯಿಂದ ಶಹಾಪುರ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಯುವ ಪತ್ರಕರ್ತ ಗಂಗಾಧರ ನಾಯಕ ರಿಗೆ ಮಾದ್ಯಮ ಸೇವೆ ಗುರುತಿಸಿ ಮಾದ್ಯಮ ರತ್ನ ಪ್ರಶಸ್ತಿ ನೀಡಲಾಯಿತು.

ಪತ್ರಿಕಾ ಸೇವೆ ಆರಂಭ : ಕಲಬುರಗಿ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದಲ್ಲಿ 2017ರಲ್ಲಿ ಪತ್ರಿಕೋದ್ಯಮ ಪದವಿ ಓದಿ ಪಾಸಾಗಿದ್ದಾರೆ. ನಂತರ 2028ರಲ್ಲಿ ಲಿಂಗಸುಗೂರ ತಾಲ್ಲೂಕಿನ ಪತ್ರಕರ್ತರಾಗಿ ಸೇವೆ ಆರಂಭಿಸಿದರು. ಮೊದಲನೆಯ ಬಾರೀಗೆ ರಾಯಚೂರು ವಾಹಿನಿ ಪತ್ರಿಕೆ ಪತ್ರಕರ್ತರಾಗಿ ಆಯ್ಕೆಗೊಂಡರು. ನಂತರ 2019 ರಲ್ಲಿ ಸ್ಟಾರ್ ಆಪ್ ರಾಯಚೂರು ದಿನ ಪತ್ರಿಕೆಯಲ್ಲಿ ಸೇವೆ ಪ್ರಾರಂಭಿಸಿದರು. ನಂತರ 2019 ಅಗಷ್ಟನಲ್ಲಿ ಹಟ್ಟಿಚಿನ್ನದಗಣಿಯ ಉದಯವಾಣಿ ಪತ್ರಿಕೆಗೆ ಆಯ್ಕೆಯಾಗಿದರು. ನಂತರ 2020ರಲ್ಲಿ ವಿಶ್ವವಾಣಿ ಪತ್ರಿಕೆಯ ಲಿಂಗಸುಗೂರ ತಾಲ್ಲೂಕು ವರದಿಗಾರಾಗಿ ನೇಮಕಗೊಂಡರು. ರಾಜ್ಯದಲ್ಲಿ ಕೋವಿಡ್ ಆವರಿಸಿದ ಕಾರಣ ಪತ್ರಿಕಾ ರಂಗದಲ್ಲಿ ಬಹುದೊಡ್ಡ ಬದಲಾವಣೆಗಳು ನಡೆದರು ಪತ್ರಿಕೆಗಳ ಸರಬರಾಜು ನಿಂತುಕೊಂಡವು. ಆದರೆ ಸ್ಟಾರ್ ಆಫ್ ರಾಯಚೂರು ದಿನ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಾ ಇಲ್ಲಿಯವರೆಗೂ ಅದೇ ಪತ್ರಿಕೆಯಲ್ಲಿ ಮುಂದುವರೆದಿದ್ದಾರೆ.

ಪತ್ರಿಕೋದ್ಯಮ ಪದವಿ ಮುಗಿಸಿದ ಗಂಗಾಧರ ನಾಯಕರಿಗೆ ಅನೇಕ ಅವಕಾಶಗಳು ಬಂದರು ಕೂಡ ಬೇರೆ ಕಡೆಗೆ ಹೋಗದೇ ಲಿಂಗಸುಗೂರ ಪಟ್ಟಣದಲ್ಲಿ ಕಾರ್ಯನಿರ್ವಹಣೆ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ.

ವಿಶೇಷ ಲೇಖನ :
ಕಲೆ, ಸಾಹಿತ್ಯ, ಬಡತನ, ಗ್ರಾಮಗಳ ಮೂಲಭೂತ ಸೌಕರ್ಯಗಳ ಕುರಿತು ನಿರಂತರವಾಗಿ ಸುದ್ದಿ ಬರೆದು ಇಡೀ ಸಾರ್ವಜನಿಕರ ಗಮನ ಸೇಳೆದಿದ್ದಾರೆ.

ಸತ್ಯ, ಸಮಸ್ಯೆ, ನೇರವಾಗಿ ರಾಜಕಾರಣಿಗಳ ವಿರುದ್ದವಾಗಿ ಬರೆದು ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದ ಯುವ ಪತ್ರಕರ್ತರು ಎಂಬ ಹೆಸರುವಾಸಿಯಾಗಿದೆ.

ಇಂದಿನ ಹೊಂದಾಣಿಕೆಯ
ಪತ್ರಿಕಾ ರಂಗದಲ್ಲಿ ನೇರವಾಗಿ ಬರೆಯುವ ಮೂಲಕ ಯಾವುದೇ ಮುಲಾಜಿ ರಾಜಿಯಾಗದೇ ನೇರ ದಿಟ್ಟ, ಗಟ್ಟಿತನ ವ್ಯಕ್ತಿಯಾಗಿ ರೂಪಗೊಂಡಿದ್ದು ಪತ್ರಿಕೋದ್ಯಮ ಧರ್ಮ ಉಳಿಸಿಕೊಂಡು ಬರುವ ಯುವ ಪತ್ರಕರ್ತರಾಗಿದ್ದಾರೆ.

ಸಂಘಟನೆಯ ಕಾರ್ಯ
ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರಾದ ಇವರನ್ನು ಸೇವೆ, ಕಾರ್ಯ, ವ್ಯಕ್ತಿತ್ವ ಗುರುತಿಸಿ 2025ರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಾ ಪತ್ರಿಕಾ ಸಹೋದ್ಯೋಗಿಗಳ ಜೊತೆಗೆ ಪ್ರೀತಿ ವಿಶ್ವಾಸ ಗಳಿಸಿಕೊಂಡು ತಮ್ಮದೇ ಕಾರ್ಯವನ್ನು ಮುಂದುವರೆಸಿದ್ದಾರೆ.

ಸಾಮಾಜಿಕ ಕಾಳಜಿ
ಸಮಾಜ ಅಭಿವೃದ್ಧಿ, ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಂಬಲ ಜೊತೆಗೆ ಹೋರಾಟ ಮನೋಭಾವ ಹೊಂದಿದ್ದಾರೆ. ಇವರ ಸೇವೆ ಕುರಿತು ಹಲವರು ಪ್ರಶಂಸೆ ವ್ಯಕ್ತಪಡಿಸಿದರು.

ಮಾದ್ಯಮ ರಂಗದಲ್ಲಿ ಹೆಚ್ಚು ಪ್ರಶಸ್ತಿಗಳು ಲಭ್ಯಿಸಲಿ ಎಂದು ಲಿಂಗಸುಗೂರ ತಾಲ್ಲೂಕಿನ ಪತ್ರಕರ್ತರು, ಸಂಘಟನೆಯ ಅಧ್ಯಕರು, ಅಭಿಮಾನಿಗಳು, ಸೇರಿದಂತೆ ಅನೇಕರು ಶುಭ ಕೋರಿದರು.

ಯುವ ಪತ್ರಕರ್ತರಾಗಿ ಲಿಂಗಸುಗೂರ ತಾಲ್ಲೂಕಿನ ಎಲ್ಲಾ ಗ್ರಾಮಗಳ ಬಗ್ಗೆ ಸಮಗ್ರವಾಗಿ ವರದಿಗಳನ್ನು ಮಾಡಿ ಸಾಮಾಜಿಕ ಕಳಕಳಿ ಹೊಂದಿದ್ದಾರೆ ಇಂತಹವರನ್ನು ಗುರುತಿಸಿ ಸರ್ಕಾರ ಪ್ರಶಸ್ತಿಗಳನ್ನು ನೀಡಿ ಗೌರವಿಸಬೇಕಿದೆ. ಅಮರೇಶ ಹುನ್ನೂರು ನಿವೃತ್ತ ತಹಶಿಲ್ದಾರರ, ಲಿಂಗಸುಗೂರ.

ಲಿಂಗಸುಗೂರ ತಾಲ್ಲೂಕಿನ ಹೋರಾಟ, ಸಮಸ್ಯೆ ಸೇರಿದಂತೆ ನೇರವಾಗಿ ಪತ್ರಿಕೆಯಲ್ಲಿ ವರದಿಗಳನ್ನು ಮಾಡಿ ಆಡಳಿತ ಸರ್ಕಾರಕ್ಕೆ ಎಚ್ಚರಿಕೆ ಮಾಡುವ ಜೊತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಶಿವಪುತ್ರಪ್ಪಗೌಡ ನಂದಿಹಾಳ, ಹೋರಾಟಗಾರರು ಲಿಂಗಸುಗೂರ.

Share This Article