ಸಿದ್ದರಾಮಯ್ಯ ನಾಯಕತ್ವ ಎಲ್ಲರಿಗೂ ಮಾದರಿ, ಭಾವುಕ ಪೋಸ್ಟ್ ಮಾಡಿದ ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಿರ್ಗಮಿಸಿರುವ ಸಿದ್ದರಾಮಯ್ಯ ಅವರ ಬಗ್ಗೆ ಶಾಸಕ ಸತೀಶ್ ಜಾರಕಿಹೊಳಿ (Satish Jarkiholi) ಭಾವುಕರಾಗಿ ಬರೆದುಕೊಂಡಿದ್ದು, ಅವರ ಸೈದ್ಧಾಂತಿಕ ಬದ್ಧತೆ ಎಲ್ಲರಿಗೂ ಮಾದರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ
ನಾಯಕತ್ವದ ಶಕ್ತಿ ಸಿದ್ದರಾಮಯ್ಯರಲ್ಲಿದೆ
ಬಡತನ ಮತ್ತು ಶೋಷಿತ ವರ್ಗದ ಹಿನ್ನೆಲೆಯಿಂದ ಹೊರಹೊಮ್ಮಿ, ತಮ್ಮ ನಿರಂತರ ಹೋರಾಟ, ಪರಿಶ್ರಮ ಹಾಗೂ ಜನಪರ ಬದ್ಧತೆಯ ಮೂಲಕ ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಅಪರೂಪದ ನಾಯಕ ಶ್ರೀ ಸಿದ್ದರಾಮಯ್ಯ ಅವರು. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿರುವುದು ನನಗೆ ಮಾತ್ರವಲ್ಲ, ಅಸಂಖ್ಯಾತ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಹೋರಾಟಗಾರರಿಗೆ ಭಾವನಾತ್ಮಕ ಕ್ಷಣವಾಗಿತ್ತು. ಸಿದ್ದರಾಮಯ್ಯ ಅವರ ನುಡಿದಂತೆ ನಡೆಯುವ ಗುಣ, ಸಾಮಾಜಿಕ ನ್ಯಾಯದ ಮೇಲಿನ ಅಚಲ ನಂಬಿಕೆ, ದಮನಿತ ಹಾಗೂ ಹಿಂದುಳಿದ ಸಮುದಾಯಗಳ ಪರ ಇರುವ ಕಾಳಜಿ ಮತ್ತು ಸೈದ್ಧಾಂತಿಕ ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ. ಅವರು ಯಾವುದೇ ಹುದ್ದೆಯಲ್ಲಿ ಇರಲಿ ಅಥವಾ ಇರದಿರಲಿ, ಸಮಾಜವನ್ನು ಮುನ್ನಡೆಸುವ ನಾಯಕತ್ವದ ಶಕ್ತಿ ಅವರಲ್ಲಿದೆ ಎಂದಿದ್ದಾರೆ
https://x.com/JarkiholiSatish/status/2060637384367350242?ref_src=twsrc%5Etfw%7Ctwcamp%5Etweetembed%7Ctwterm%5E2060637384367350242%7Ctwgr%5E80bc8aedcbe19abbbc7f1762fc8f907c6194dec5%7Ctwcon%5Es1_c10&ref_url=http%3A%2F%2Fapi-news.dailyhunt.in%2F
ಅವರ ಜೊತೆ ಕೆಲಸ ಮಾಡಿರುವುದು ನಮಗೆ ಹೆಮ್ಮೆ
ಹಾಗೆಯೇ, ಅವರ ಅನುಭವ, ದೂರದೃಷ್ಟಿ, ಮಾರ್ಗದರ್ಶನ ಮತ್ತು ಸಲಹೆಗಳು ಸರ್ಕಾರಕ್ಕೆ, ಪಕ್ಷಕ್ಕೆ ಹಾಗೂ ಸಮಾಜಕ್ಕೆ ಮುಂದೆಯೂ ಅತ್ಯಂತ ಅಗತ್ಯವಾಗಿವೆ. ಅಹಿಂದ ಚಳವಳಿಯ ಹೋರಾಟದ ದಿನಗಳಿಂದಲೇ ಅವರೊಂದಿಗೆ ಹೆಜ್ಜೆ ಹಾಕುವ ಅವಕಾಶ ದೊರೆತಿರುವುದು ನನ್ನ ಪಾಲಿನ ಹೆಮ್ಮೆಯ ಸಂಗತಿಯಾಗಿದೆ. ಅವರ ನೇತೃತ್ವದ ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ತೃಪ್ತಿ ನನಗಿದೆ. ಅವರ ರಾಜಕೀಯ ಪಯಣವು ಕೇವಲ ಅಧಿಕಾರದ ಸುತ್ತ ಸೀಮಿತವಾಗಿರಲಿಲ್ಲ; ಅದು ಸಂವಿಧಾನದ ಆಶಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿರಂತರ ಹೋರಾಟವಾಗಿತ್ತು. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಅಹಿಂದ ಸಮುದಾಯಗಳ ಸಬಲೀಕರಣಕ್ಕಾಗಿ ಅವರು ನೀಡಿರುವ ಕೊಡುಗೆ ಚಿರಸ್ಥಾಯಿಯಾಗಿರಲಿದೆ. ಮುಂದಿನ ದಿನಗಳಲ್ಲಿಯೂ ಅವರ ಸಾರ್ವಜನಿಕ ಜೀವನ ಇನ್ನಷ್ಟು ಪ್ರಭಾವಶಾಲಿಯಾಗಿ ಮುಂದುವರಿದು, ನಾಡಿನ ಅಭಿವೃದ್ಧಿ ಹಾಗೂ ಶೋಷಿತ ಸಮುದಾಯಗಳ ಹಿತಕ್ಕಾಗಿ ದಿಕ್ಕು ತೋರಿಸಲಿ ಎಂಬುದು ಅವರು ಹಾರೈಸಿದ್ದಾರೆ