ಲಿಂಗಸ್ಗೂರು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ನೀಟ್ -2026 ರ ಫಲಿತಾಂಶದಲ್ಲಿ ಶ್ರೀ ಉಮಾಮಹೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳಿಸಿದ್ದಾರೆ.
ಶಿವುಕುಮಾರ ಎಮ್ 720 ಕ್ಕೆ 573 ಅಂಕ ಪಡೆದು ಕಾಲೇಜಿಗೆ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ರವಿ ಎಮ್ಮಿ 554, ಮಂಜುನಾಥ ಶಿವಪ್ಪ 548, ಅಜಯ ರಾಠೋಡ 527, ಶ್ರೀಕಾಂತ ಬಸವರಾಜ 526, ಅಮರ ಬನ್ನಿಕೊಪ್ಪ 522, ಸೃಷ್ಟಿ ಶರಣಪ್ಪ 497, ಮಹೇಶಕುಮಾರ ಗಣಾಚಾರಿ 494, ಮಧುಶ್ರೀ ದೇವಿಂದ್ರಪ್ಪ 486, ವನಜಾಕ್ಷಿ ಹನುಮಂತರೆಡ್ಡಿ 480, ಹನುಮಂತ ಆರ್.ಬಿ 479, ರಮೇಶ ಉಮೇಶ 474 ಅಂಕಗಳು ಸೇರಿದಂತೆ ಒಟ್ಟು 44 ವಿದ್ಯಾರ್ಥಿಗಳು 400 ಕ್ಕೂ ಅಧಿಕ ಅಂಕ ಗಿಟ್ಟಿಸಿಕೊಂಡಿದ್ದಾರೆ.
ಸಂಸ್ಥೆಯ ಒಟ್ಟು 58 ವಿದ್ಯಾರ್ಥಿಗಳು ನೀಟ್ ನಲ್ಲಿ ಕ್ವಾಲಿಫೈಡ್ ಆಗಿದ್ದು, ಆ ಪೈಕಿ ಅಂದಾಜು 24ಕ್ಕೂ ಅಧಿಕ ವಿದ್ಯಾರ್ಥಿಗಳು ವೈಧ್ಯಕೀಯ ಕ್ಷೇತ್ರದಲ್ಲಿ ಸರಕಾರಿ ಎಂಬಿಬಿಎಸ್ ಸೀಟಗಳನ್ನು ಪಡೆಯಲಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ ಹೇಳಿದರು.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶರಣಬಸವ ಗಣಾಚಾರಿ, ಪ್ರಾಂಶುಪಾಲ ಜಿ.ವಿ.ಸುರೇಶ, ನೀಟ್ ಸಂಯೋಜಕ ಸಂಗಯ್ಯ ಸಿಂದಗಿಮಠ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿ, ಶ್ಲಾಘಿಸಿದ್ದಾರೆ.