ಕಾರ್ಗಿಲ್ ವಿಜಯ್ ದಿವಸ್, ಡಾಕ್ಟರ್ಸ್ ಡೇ ಮತ್ತು ಪತ್ರಿಕೋದ್ಯಮ ದಿನಾಚರಣೆ: “ಮಾಧ್ಯಮ ಸೇವಾ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ರಾಷ್ಟ್ರ ರಕ್ಷಣೆಯಲ್ಲಿ ಸೈನಿಕರ ಪಾತ್ರ ಎಷ್ಟು ಮುಖ್ಯವೋ, ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಮತ್ತು ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಸೇವೆ ಅಷ್ಟೇ ಅಮೂಲ್ಯವಾದದ್ದು ಎಂದು ‘ಕಾಂತಾರ’ ಸಿನಿಮಾ ಖ್ಯಾತಿಯ ನಟ ಸ್ವರಾಜ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ನಯನ ಸಭಾಂಗಣದಲ್ಲಿ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ ಹಾಗೂ ‘ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್’ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ, ಕಾರ್ಗಿಲ್ ವಿಜಯ್ ದಿವಸ್ ಹಾಗೂ ಸಾಂಸ್ಕೃತಿಕ ಸಿಂಚನ-23’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೈನಿಕರ ಸ್ಮರಣೆ:ಐತಿಹಾಸಿಕ ಮೈಲಿಗಲ್ಲಾದ ಕಾರ್ಗಿಲ್ ವಿಜಯ್ ದಿವಸ್ ಮೂಲಕ ದೇಶಕ್ಕಾಗಿ ಹಗಲಿರುಳು ಶ್ರಮಿಸುವ ಸೈನಿಕರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಟ ಸ್ವರಾಜ್ ಶೆಟ್ಟಿ ತಿಳಿಸಿದರು.
ಸ್ವಸ್ಥ ಸಮಾಜ ನಿರ್ಮಾಣ: ಸೈನಿಕ, ವೈದ್ಯ ಮತ್ತು ಪತ್ರಕರ್ತರು ಎಂಬ ಮೂರು ಪ್ರಮುಖ ಸ್ತಂಭಗಳು ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಗಣನೀಯ ಪಾತ್ರ ವಹಿಸುತ್ತವೆ ಎಂದು ರಿಪಬ್ಲಿಕ್ ಕನ್ನಡ ಚಾನೆಲ್ನ ನಿರೂಪಕಿ ಕು. ರೂಪಾ ಚಂದ್ರು ತಿಳಿಸಿದರು.

ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರದಾನ: ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾಧಕ ಹಿರಿಯ ಪತ್ರಕರ್ತರು ಹಾಗೂ ಗಣ್ಯರನ್ನು ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತ ಸಾಧಕ ಪತ್ರಕರ್ತರು:
* ವೆಂಕಟಸ್ವಾಮಿ
* ಅಮರೇಶಣ್ಣ ಕಾಮನಕೇರಿ (ಸಂಸ್ಥಾಪಕರು ಹಾಗೂ ಸಿಇಒ, ಆನ್ಲೈನ್ ಹಂಟ ನ್ಯೂಸ ಅಗ್ರಿಗೇಟರ್ ಆ್ಯಪ್)
* ಅಮ್ಜದ್ ಖಾನ್
* ಶರಣಯ್ಯ ಒಡೆಯರ್
* ಮುರಳಿ ಗುತ್ತಾ
* ಅಮರೇಶ್ ಬಿ. ಕಲ್ಲೂರು
* ಸಿದ್ದನಗೌಡ
* ಶಿವಕುಮಾರ್
* ನಿಂಗಪ್ಪ ಗುದಿಗೇರ
* ಗಿರೀಶ್ ಕೆ.ಆರ್.




ಸಾಂಸ್ಕೃತಿಕ ವೈಭವ ಮತ್ತು ಉಪಸ್ಥಿತಿ:
ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಸಾಂಸ್ಕೃತಿಕ ರಂಗನ್ನು ಮೂಡಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ಇದು ನಿಮ್ಮ ವಾಹಿನಿ’ ಕಲಾ ವೇದಿಕೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೆ.ಎಸ್. ವಹಿಸಿದ್ದರು. ಈ ಸಂದರ್ಭದಲ್ಲಿ ಗಂಡಸಿ ಸದಾನಂದ ಸ್ವಾಮಿ, ವಿ. ನಂಜುಂಡಪ್ಪ, ಸುನೀತಾ ನಾಗೇಶ್, ಡಾ. ಕುಮಾರಸ್ವಾಮಿ, ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ಅಧ್ಯಕ್ಷೆ ಡಾ. ವಿ. ಭರಣಿರಾಜು, ಡಾ. ಪವನ್ ರಾಜ್ ಎನ್., ಕಿರುತೆರೆ ನಟಿ ಅಂಕಿತ ಜಯರಾಮ್ ಹಾಗೂ ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಬಿ.ವಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.