ಮಂಡ್ಯ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಸಮಾರಂಭ: ಸನ್ಮಾನ್ಯ ಡಿ. ಜಯರಾಮ್ ರವರಿಂದ ದತ್ತಿ ನಿಧಿ ಘೋಷಣೆ

Veer Rc
By Veer Rc

ಮಂಡ್ಯ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಸಮಾರಂಭ: ಸನ್ಮಾನ್ಯ ಡಿ. ಜಯರಾಮ್ ರವರಿಂದ ದತ್ತಿ ನಿಧಿ ಘೋಷಣೆ

 

ಮಂಡ್ಯ : ಮಂಡ್ಯ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರ ಸಂಘದ ಉದ್ಘಾಟನಾ ಮಹಾಸಮಾರಂಭವು ಬರುವ ಆಗಸ್ಟ್ 23, 2026 ರ ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಮಂಡ್ಯ ನಗರದ ವಿಠಲ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ಜರುಗಲಿದೆ.

 

ಈ ಶುಭಾರಂಭದ ಅಂಗವಾಗಿ ಪ್ರಮುಖ ಗಣ್ಯರೊಬ್ಬರಿಗೆ ವಿಶೇಷ ಆಹ್ವಾನ ನೀಡಲು ಉಮೇಶ ಆಡ್ಯರವರ ನೇತೃತ್ವದಲ್ಲಿ ಹೋದಾಗ, ಮಹತ್ವದ ಘೋಷಣೆಯೊಂದು ಹೊರಬಿದ್ದಿದೆ.

 

ವಿಶೇಷ ಆಹ್ವಾನ ಹಾಗೂ ದತ್ತಿ ನಿಧಿ ಘೋಷಣೆ
ಸಹಕಾರ ಸಂಘದ ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಸನ್ಮಾನ್ಯ ಡಿ. ಜಯರಾಮ್ ರವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಅಂಬಿಗರ ಚೌಡಯ್ಯ ಸೌಹಾರ್ದ ಸಹಕಾರ ಸಂಘದ ಅಭಿವೃದ್ಧಿಗಾಗಿ ತಮ್ಮ ಹೆಸರಿನಲ್ಲಿ ದತ್ತಿ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು.

ಸಂಘದ ಬೆಳವಣಿಗೆಗೆ ಅತಿ ಹೆಚ್ಚು ಷೇರುಗಳನ್ನು ಪಡೆದುಕೊಂಡು ಪ್ರಮುಖ ಬೆಂಬಲ ಹಾಗೂ ಸಹಕಾರ ನೀಡಿರುವ ಶ್ರೀಯುತ ಡಿ. ಜಯರಾಮ್ ರವರ ಈ ಉದಾರ ಕೊಡುಗೆಗೆ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಕೃತಜ್ಞತೆಗಳು ಮತ್ತು ಶುಭ ಹಾರೈಕೆ
ಸಹಕಾರ ಸಂಘಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಶ್ರೀಯುತ ಡಿ. ಜಯರಾಮ್ ಅವರಿಗೆ ಸಂಘದ ಪದಾಧಿಕಾರಿಗಳು ಹಾಗೂ ಸಮಸ್ತ ಸಮಾಜದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಗಿದೆ.

ತಾಯಿ ಗಂಗಾಪರಮೇಶ್ವರಿಯ ಕೃಪೆಯಿಂದ ಅವರಿಗೆ ಉತ್ತಮ ಆಯುರೋಗ್ಯ, ಸುಖ-ಸಮೃದ್ಧಿ ಹಾಗೂ ಸಮಾಜದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಈ ಸಂದರ್ಭದಲ್ಲಿ ಹಾರೈಸಲಾಗಿದೆ.

 

Share This Article