ವಿಜಯಪುರ ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು-ಮುಂಬೈ ಹೈಸ್ಫೀಡ್ ಬುಲೆಟ್ ಟ್ರೇನ್ ಕಾರಿಡಾರ್ ಜಾರಿಯಾಗಲಿ: ರವಿ ಖಾನಾಪುರ

ವಿಜಯಪುರ: ಮುಂಬೈ-ಪುಣೆ ಬೆಂಗಳೂರು ಹೈಸ್ಪೀಡ್ ಬುಲೆಟ್ ರೈಲ್ವೆ ಕಾರಿಡಾರ್ ಯೋಜನೆ ವಿಜಯಪುರ – ವಿಜಯನಗರ ಚಿತ್ರದುರ್ಗ ತುಮಕೂರು ರೈಲ್ವೆ ಮಾರ್ಗಗಳಲ್ಲಿ ಜಾರಿಯಾಗಲಿ ಎಂದು ಮಾಜಿ ಕೃಷ್ಣಾ ನದಿ ಕಾಡ ನಿರ್ದೇಶಕರಾದ ರವಿ ಖಾನಾಪುರ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಂಗಳೂರು-ಪುಣೆ- ಮುಂಬೈ ಹೈಸ್ಪೀಡ್ ಬುಲೆಟ್
ರೈಲ್ವೆ ಕಾರಿಡಾರ್ ನ್ನು ಮಂಜೂರು ಮಾಡಬೇಕೆಂದು ಹಲವು ವರ್ಷಗಳಿಂದ ಈ ಭಾಗದ ಬೇಡಿಕೆಯಾಗಿದು ಬಜೆಟ್ ಗೂ ಮುನ್ನ ರೈಲ್ವೆ ಸಚಿವರಿಗೂ ಹಾಗೂ ಪ್ರಧಾನಮಂತ್ರಿಗಳಿಗೂ ಮನವಿ ಮಾಡಿಕೊಂಡಿದ್ದಾರೆ ಎಂದು ನೆನಪಿಸಿಕೊಂಡಿರುವ ಅವರು ವಿಜಯಪುರ ವಿಜಯನಗರ ತುಮಕೂರು ಮಾರ್ಗವಾಗಿ ಈ ಯೋಜನೆ ಪ್ರಾರಂಭಿಸಿದರೆ, ಕರ್ನಾಟಕ, ಮತ್ತು ಮಹಾರಾಷ್ಟ್ರ ರಾಜ್ಯಗಳಕ್ಕೆ ವೇಗದ ಸಂಪರ್ಕ ಸಾಧಿಸಿದಂತಾಗುತ್ತದೆ ಮಾತ್ರವಲ್ಲ ಈ ಮಾರ್ಗವೂ ಆದಾಯವೂ ಭರಪೂರವಾಗಿರುವುದರಿಂದ ಈ ಯೋಜನೆಯನ್ನು ಇದೆ ಮಾರ್ಗವಾಗಿ ಪ್ರಾರಂಭಿಸಬೇಕೆಂದು ಅವರು ಕೋರಿದ್ದಾರೆ.
2026-27ರ ಕೇಂದ್ರ ಬಜೆಟ್ ನಲ್ಲಿ ಬೆಂಗಳೂರು-ಪುಣೆ-ಮುಂಬೈ ಮತ್ತು ಚೆನ್ನೈ- ಬೆಂಗಳೂರು ನಡುವೆ ಹೈ-ಸ್ಪೀಡ್ ಬುಲೆಟ್
ರೈಲ್ವೆ ಕಾರಿಡಾರ್ ಗಳ ಮೇಲೆ ಗಮನ ಹರಿಸುವ ಮೂಲಕ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಲಾಗಿದೆ. ಈ ಮೂಲಕ ಸಂಪರ್ಕದ ಜೊತೆ ವ್ಯಾಪಾರ ಹೆಚ್ಚಾಗಲಿದೆ. ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಗಳ ಬಲವರ್ಧನೆ ಬೆಳವಣಿಗೆ ಮತ್ತು ಹೊಸ ಉದ್ಯೋಗ ಗಳು ಸೃಷ್ಠಿಯಾಗಲಿವೆ. ಈ ಯೋಜನೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ಪ್ರಮುಖ ಆರ್ಥಿಕ ಕೇಂದ್ರಗಳೊಂದಿಗೆ ಸೇರಿಸಲಿದೆ. ಭಾರತದ ಅಭಿವೃದ್ಧಿಯನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ