ಜವಾಹಾರಲಾಲ್ ನೆಹರು ರವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಆಹಾರ ಸಚಿವ ಕೆಹೆಚ್.ಮುನಿಯಪ್ಪ ಭಾಗಿ

Veer Rc
By Veer Rc

ಪಂಚವಾರ್ಷಿಕ ಯೋಜನೆಗಳೆ ಈ ದೇಶದ ಅಭಿವೃದ್ಧಿಗೆ ಸಹಕಾರಿ ಆಹಾರ ಸಚಿವ ಕೆಹೆಚ್. ಮುನಿಯಪ್ಪ.

ಬೆಂಗಳೂರು.27 :: ಕ್ವೀನ್ಸ್ ರಸ್ತೆಯ *ಕೆಪಿಸಿಸಿ ಕಚೇರಿಯಲ್ಲಿಂದು ಭಾರತದ ಮೊದಲ ಪ್ರಧಾನಿ ದಿ: ಪಂಡಿತ್ ಜವಾಹರಲಾಲ್ ನೆಹರು ರವರ ಪುಣ್ಯ ಸ್ಮರಣೆ* ಕಾರ್ಯಕ್ರಮವನ್ನು ಆಯೊಜಿಸಿದ್ದು ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ರವರು ನೆಹರೂ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.

ನಂತರ ಮಾತನಾಡಿದ ಸಚಿವರು ಮಹಾತ್ಮ ಗಾಂಧಿಯವರ ಅನುಯಾಯಿಯಾಗಿ ದೀರ್ಘ ಕಾಲ ಜೈಲುವಾಸ ಅನುಭವಿಸಿದವರು ಭಾರತ‌ ಸ್ವಾತಂತ್ರ್ಯ ಬಂದ ನಂತರ ಮೊದಲ ಪ್ರಧಾನಿಯಾಗಿ ಎಐಸಿಸಿ ಜವಾಹರಲಾಲ್ ಲಾಲ್ ನೆಹರೂ ರವರನ್ನು ಪ್ರಧಾನಿಯಾಗಿ ಮಾಡಿದರು

ಅವರು ಈ ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದರು
ಈ ದೇಶದ ಸುಮಾರು 75ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ ಅವರ ಹಿತ ಕಾಯುವದರೊಂದಿಗೆ ದೇಶದ ಆರ್ಥಿಕ ಭದ್ರತೆಗಾಗಿ ಕೈಗಾರಿಕಾ ಕ್ರಾಂತಿಯನ್ನುಂಟು ಮಾಡಲು ಜರ್ಮನ್ ,ಜಪಾನ್ ದೇಶಗಳ ಸಹಕಾರದೊಂದಿಗೆ ದೇಶದಲ್ಲಿ ಹಲವಾರು ಕೈಗಾರಿಕೆಗಳ ಬೆಳವಣಿಗೆಗೆ ಕಾರಣವಾದರು

ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ಹೃದಯ ಭಾಗವಾದ ಬೆಂಗಳೂರಿಗೆ ಬಿಎಚ್ಇಎಲ್,ಬಜಿಎಮ್ ಎಲ್,ಬೆಮೆಲ್,ಬೆಲ್,ಐಟಿಐ, ಇವುಗಳನ್ನು ನಿರ್ಮಿಸುವುದರೊಂದಿಗೆ ಕೈಗಾರಿಕೆಗಳ ಅಭಿವೃದ್ಧಿ ಗೆ ಸಹಕಾರಿಯಾರು ಇಂದು ದೇಶದಲ್ಲಿಯೆ ಬೆಂಗಳೂರು ಸಿಲಿಕಾನ್ ಸಿಟಿಯಾಗಿ ಮಾದರಿಯಾಗಿದೆ

ಪಂಚವಾರ್ಷಿಕ ಯೊಜನೆಗಳು ಈ ದೇಶದ ಸರ್ವಾಂಗೀಣ ಅಭಿವೃದ್ಧಿ ಗೆ ಮಾದರಿಯಾಗಿದೆ ಅವರ ಶ್ರಮ ಈ ದೇಶದ ಕಟ್ಟ ಕಡೆಯ ಪ್ರಜೆಯ ಸ್ಮರಿಸಬೇಕಾಗಿದೆ
ಇಂದು ಅವರ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ನಾವೆಲ್ಲಾರು ಅವರನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಗೋಪಿನಾಥ್ ಪಲಿನಿಯಪ್ಪನ್ , ಮಾಜಿ ಸಚಿವರಾದ ಎಚ್.ಆಂಜನೇಯ,ಎಚ್.ಎಂ ರೇವಣ್ಣ,ಮಾಜಿ ಸಂಸದರಾದ ಉಗ್ರಪ್ಪ,ಚಂದ್ರಪ್ಪ, ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷರಾದ ಧರ್ಮಸೇನ್, ಕೆಪಿಸಿಸಿ ಕಾರ್ಯದ್ಯಕ್ಷರಾದ ಮಂಜುನಾಥ್ ಬಂಡಾರಿ,ವಿಧಾನ ಪರಿಷತ್ ನ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಾಗೂ ಮುಖಂಡರು ಉಪಸ್ಥಿತರಿದ್ದರು.

Share This Article