ಕಾಗದದಲ್ಲಿ ಹಂಚಿಕೆ, ಖಾತೆಯಲ್ಲಿ ಶೂನ್ಯ: ರಾಜ್ಯದ 4ನೇ ಅತಿದೊಡ್ಡ ಸಮುದಾಯವಾದ ಕೋಲಿ-ನಿಷಾದ ಅಭಿವೃದ್ಧಿ ನಿಗಮಗಳಿಗೆ ಅನುದಾನ ವಂಚನೆ?

Veer Rc
By Veer Rc

“ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗಾಗಿ ಸೃಷ್ಟಿಯಾಗಿರುವ ನಿಗಮಗಳಿಗೆ ಅತೀ ಕಡಿಮೆ ಅನುದಾನ ನೀಡಿ, ಅದರಲ್ಲೂ ಬಿಡುಗಡೆಯಾದ ಹಣವನ್ನು ಕೂಡ ಖರ್ಚು ಮಾಡದೆ ಸರ್ಕಾರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಅಧಿಕಾರಕ್ಕೆ ಬಂದ ಮೂರು ವರ್ಷಗಳಾದರೂ ರಾಜ್ಯದ 4ನೇ ಅತಿದೊಡ್ಡ ಸಮುದಾಯವಾಗಿರುವ ಕೋಲಿ-ನಿಷಾದ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ನೀಡದೆ ಸಮುದಾಯಕ್ಕೆ ಸರ್ಕಾರವು ಯಾವುದೇ ಮೋಸ ಮಾಡಬಾರದು ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಅನುದಾನವನ್ನು ಬಿಡುಗಡೆ ಮಾಡಬೇಕು.”

— ಅಮರೇಶಣ್ಣ ಕಾಮನಕೇರಿ

ಬೆಂಗಳೂರು: ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ, ರಾಜ್ಯದ 4ನೇ ಅತಿದೊಡ್ಡ ಸಮುದಾಯವಾಗಿ ಗುರುತಿಸಿಕೊಂಡಿರುವ ಕೋಲಿ-ನಿಷಾದ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಸ್ಥಾಪಿಸಲಾಗಿರುವ ವಿವಿಧ ನಿಗಮಗಳಿಗೆ ಅನುದಾನ ಹಂಚಿಕೆಯಲ್ಲಿ ತೀವ್ರ ಕಣ್ಣೊರೆಸುವ ತಂತ್ರ ನಡೆಯುತ್ತಿದೆ ಎಂದು ಮುಖಂಡರಾದ ಅಮರೇಶಣ್ಣ ಕಾಮನಕೇರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದರೂ, ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಿಡುಗಡೆಯಾಗದೇ ಇರುವುದು ಗಂಭೀರ ಚರ್ಚೆಗೆ ಗ್ರಾಸವಾಗಿದೆ.

ಅಧಿಕೃತ ದಾಖಲೆಗಳ ಮುಖ್ಯಾಂಶಗಳು:

  • ಕಾಗದದಲ್ಲಷ್ಟೇ ಸೀಮಿತ ಹಂಚಿಕೆ: 2026-27ನೇ ಸಾಲಿನ ಸರ್ಕಾರದ ಅಧಿಕೃತ ದಾಖಲೆಗಳ ಪ್ರಕಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ 17 ನಿಗಮಗಳಿಗೆ ಒಟ್ಟು ₹473.41 ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ ಎಂದು ತೋರಿಸಲಾಗಿದೆ.
  • ಬಿಡುಗಡೆಯಾದ ಮೊತ್ತ ಶೂನ್ಯ: ಹಂಚಿಕೆಯಾದ ಕೋಟ್ಯಂತರ ರೂಪಾಯಿ ಹಣದಲ್ಲಿ ಇದುವರೆಗೆ ಒಂದೇ ಒಂದು ರೂಪಾಯಿಯೂ (₹0.00 ಕೋಟಿ) ಬಿಡುಗಡೆಯಾಗಿಲ್ಲ ಎಂಬುದು ದಾಖಲೆಗಳಿಂದ ಬಹಿರಂಗಗೊಂಡಿದೆ.
  • ಸಮುದಾಯದ ಆಕ್ರೋಶ: ರಾಜ್ಯದ 4ನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಕೋಲಿ-ನಿಷಾದ ಸೇರಿದಂತೆ ಇತರ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಿ, ಅದನ್ನು ಬಿಡುಗಡೆ ಮಾಡದೆ ಇರುವುದು ಸಮುದಾಯಕ್ಕೆ ಮಾಡುತ್ತಿರುವ ದ್ರೋಹ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುದಾನ ಹಂಚಿಕೆ ಮತ್ತು ಬಿಡುಗಡೆಯ ವಿವರ (ಕೋಷ್ಟಕ):

ಕ್ರಮ ಸಂಖ್ಯೆ ನಿಗಮದ ಹೆಸರು ಹಂಚಿಕೆ (ಕೋಟಿ ರೂ.) ಬಿಡುಗಡೆ (ಕೋಟಿ ರೂ.) ಶೇಕಡಾವಾರು (%)
5 ಕರ್ನಾಟಕ ರಾಜ್ಯ ಕುಲಶಾಲಿ ಅಭಿವೃದ್ಧಿ ನಿಗಮ 2.00 0.00 0.00%
6 ಕರ್ನಾಟಕ ರಾಜ್ಯ ಹುಣಗೆದಾರಿಕೆ ನಿಗಮ 18.00 0.00 0.00%
7 ಕರ್ನಾಟಕ ರಾಜ್ಯ ಸೋಲಿಗಗಾರಿಕ ನಿಗಮ 6.00 0.00 0.00%
8 ಕರ್ನಾಟಕ ರಾಜ್ಯ ವಾಣಿಜ್ಯ, ಕೈಗಾರಿಕ ಮತ್ತು ಸೇವೆಗಳ ಅಭಿವೃದ್ಧಿ ನಿಗಮ 5.00 0.00 0.00%
9 ಕರ್ನಾಟಕ ರಾಜ್ಯ ಮತ್ಸ್ಯ ವೃತ್ತಿ ಅಭಿವೃದ್ಧಿ ನಿಗಮ 5.50 0.00 0.00%
10 ಕರ್ನಾಟಕ ವಾಲೇಕಾರ ಅಭಿವೃದ್ಧಿ ನಿಗಮ 13.00 0.00 0.00%
11 ಕರ್ನಾಟಕ ಜಾಗೇದಾರ ಅಭಿವೃದ್ಧಿ ನಿಗಮ 10.00 0.00 0.00%
12 ಕರ್ನಾಟಕ ರಾಜ್ಯ ಅಲಿಮಾರ್ ಹಾಗೂ ಅರೆಮಾರ ನಿಗಮ 4.00 0.00 0.00%
13 ಕುರುಬ ಅಭಿವೃದ್ಧಿ ನಿಗಮ 25.00 0.00 0.00%
14 ವಿಶ್ವಕರ್ಮ ಅಭಿವೃದ್ಧಿ ನಿಗಮ 25.00 0.00 0.00%
15 ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ನಿಗಮ 6.88 0.00 0.00%
16 ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ 5.00 0.00 0.00%
17 ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ 1.00 0.00 0.00%
ಒಟ್ಟು — 473.41 0.00 0.00%

ಜನಪ್ರತಿನಿಧಿಗಳ ಮೌನದ ವಿರುದ್ಧ ಆಕ್ರೋಶ:

ರಾಜ್ಯದ 4ನೇ ಅತಿದೊಡ್ಡ ಸಮುದಾಯವಾಗಿರುವ ಕೋಲಿ-ನಿಷಾದ ಸಮುದಾಯವನ್ನು ಕೇವಲ ಮತಬ್ಯಾಂಕ್‌ಗಳನ್ನಾಗಿ ಬಳಸಿಕೊಳ್ಳುತ್ತಿದ್ದು, ಅಧಿಕಾರದಲ್ಲಿರುವ ಶಾಸಕರು ಸರ್ಕಾರದ ಮಟ್ಟದಲ್ಲಿ ಸಮುದಾಯದ ಧ್ವನಿಯಾಗಿ ಕೆಲಸ ಮಾಡುತ್ತಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಮತ ಪಡೆದು, ಸಮುದಾಯವನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿರುವ ಈ ಧೋರಣೆ ವಿರುದ್ಧ ಸಮುದಾಯದ ಜನತೆ ದನಿ ಎತ್ತುತ್ತಿದ್ದಾರೆ. ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟ ಅನುದಾನವನ್ನು ತಕ್ಷಣವೇ ಬಿಡುಗಡೆಗೊಳಿಸಿ, ವಚನ ಪಾಲನೆ ಮಾಡಬೇಕೆಂದು ಒತ್ತಾಯಗಳು ಕೇಳಿಬರುತ್ತಿವೆ.

Share This Article