ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ : ದೂರು ದಾಖಲು

ಬಿಗ್ ಬಾಸ್-12 ರಿಯಾಲಿಟಿ ಶೋ ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ರಣಹದ್ದು ಸಂರಕ್ಷಣಾ ಟ್ರಸ್ಟ್ ಡಿಎಫ್‌ಒಗೆ ದೂರು ನೀಡಿದೆ

ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು’ ಎಂಬ ಪದ ಬಳಕೆ ಮಾಡಿದ್ದಾರೆ.ಸುದೀಪ್ ಈ ಪದ ಬಳಕೆ ಮಾಡಿದ್ದು ತಪ್ಪು . ಈ ಬಗ್ಗೆ ಪ್ರೇಕ್ಷಕರಿಗೆ ನಟ ಸುದೀಪ್ ಕ್ಲಾರಿಟಿ ಕೊಡಲಿ, ಸರಿಯಾದ ವಿವರಣೆ ಕೊಡಲಿ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿದೆ. ಬೆಂಗಳೂರು ದಕ್ಷಿಣ ಡಿಎಫ್‌ಒ ರಾಮಕೃಷ್ಣಪ್ಪಗೆ ದೂರು ನೀಡಲಾಗಿದೆ.

ಹದ್ದು ಯಾವಾಗಲೂ ಜೀವಂತ ಪ್ರಾಣಿಗಳನ್ನ ಬೇಟಿಯಾಡಲ್ಲ. ಸತ್ತ ಪ್ರಾಣಿಗಳನ್ನ ಬೇಟೆಯಾಗುತ್ತದೆ. ಈ ಮೂಲಕ ಪರಿಸರವನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತದೆ. ಆದರೆ ಸುದೀಪ್ ಅವರು ಬಿಗ್ ಬಾಸ್ ಶೋನಲ್ಲಿ ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಹಿಡಿಯುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಹಾಗೆ ಹದ್ದು ಆ ತರಹದ ಪಕ್ಷಿ ಅಲ್ಲ..ಸುದೀಪ್ ವೀಕ್ಷಕರಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಬೇಕು ಎಂದು ದೂರಿನಲ್ಲಿ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿದೆ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ